Thursday, January 21, 2021
Home ತಾಜಾ ಸುದ್ದಿ ಆನ್ ಲೈನ್ʼನಲ್ಲಿ ವಂಚನೆ- ಗಿಫ್ಟ್ ಕಳಿಸೋದಾಗಿ ಹೇಳಿ ದುಡ್ಡಿಗೆ ಕತ್ತರಿ!..

ಆನ್ ಲೈನ್ʼನಲ್ಲಿ ವಂಚನೆ- ಗಿಫ್ಟ್ ಕಳಿಸೋದಾಗಿ ಹೇಳಿ ದುಡ್ಡಿಗೆ ಕತ್ತರಿ!..

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಬೇರೆ ಬೇರೆ ರೀತಿಯ ವಂಚನೆಗಳ ಮಧ್ಯೆ ಇತ್ತೀಚಿಗೆ ಆನ್‌ಲೈನ್ ವಂಚನೆ ಪ್ರಕರಣ ಅತಿಯಾಗಿ ವರದಿಯಾಗುತ್ತಿದೆ. ಜನರನ್ನ ಯಾಮಾರಿಸಿ ದುಡ್ಡು ಕೀಳುವ ಅಂತರಾಷ್ಟ್ರೀಯ ಆನ್‌ಲೈನ್ ವಂಚಕ‌ನೊಬ್ಬ ಸೆರೆಸಿಕ್ಕಿದ್ದು ಈತ ವಿದೇಶಿ ಮೂಲದವ. ದೆಹಲಿ ನಿವಾಸಿಯಾದ ಈತನನ್ನು ಬ್ರೈಟ್ (25) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ವಿದೇಶಿ ಸಹಚರರ ಜೊತೆಗೂಡಿ ಆನ್ ಲೈನ್ʼನಲ್ಲಿ ವಂಚನೆ ಮಾಡುವುದನ್ನೇ ಉದ್ಯೋಗ ವನ್ನಾಗಿಸಿಕೊಂಡಿದ್ದ.
I
ಇಷ್ಟಕ್ಕೂ ಈ ವಂಚಕರು ಗಿಫ್ಟ್ ಕಳಿಸೋದಾಗಿ ಕಾಲ್‌ ಮಾಡಿ ಜನರಿಗೆ ಮೋಸ ಮಾಡಿ ಹಣ ಮಾಡುತ್ತಿದ್ದರು . ಇನ್ನು ಆನ್ ಲೈನ್ ನಲ್ಲಿ ಸಾಮಾನ್ಯ ಜನರ ಪರಿಚಯ ಮಾಡಿಕೊಂಡು ವಂಚನೆ ಎಸಗುತ್ತಿದ್ದ ಈ ಗುಂಪು ಶಾದಿ ಡಾಟ್ ಕಾಮ್, ಮ್ಯಾಟ್ರೀಮೋನಿ ಸೇರಿದಂತೆ ಹಲವರಿಗೆ ಮೋಸ ಮಾಡಿದೆ.ಬಂಧಿತ ಆರೋಪಿಗಳು ದೇಶಿಯ 38, ವಿದೇಶಿದ 28 ಬ್ಯಾಂಕ್ ಖಾತೆಗಳಲ್ಲಿ ಹಣ ವಹಿವಾಟು ಮಾಡಿದ್ದರು. ಬಂಧಿತರಿಂದ 8 ಲಕ್ಷ ರೂ ಹಣ,ನಾಲ್ಕು ಲ್ಯಾಪ್ ಟಾಪ್, 10 ವಿವಿಧ ಕಂಪನಿಯ ಮೊಬೈಲ್ʼಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

- Advertisement -
- Advertisment -

Latest News

error: Content is protected !!