ಈ ದಿನಗಳಲ್ಲಿ ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿದೆ. ಅಮೆರಿಕ ಮತ್ತು ಇಟಲಿಯಂತಹ ಪ್ರಬಲ ರಾಷ್ಟ್ರಗಳು ಸಹ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿಯೂ ಈ ವೈರಸ್‌ನಿಂದ ಸುಮಾರು 16 ಜನರು ಸಾವನ್ನಪ್ಪಿದ್ದಾರೆ.
ಮೂರು ತಿಂಗಳ ಹಿಂದೆ ಜಪಾನ್‌ನಿಂದ ಭಾರತಕ್ಕೆ ಮರಳಿದ ಭಾರತೀಯ ವೈದ್ಯರೊಬ್ಬರು ಕೊರೊನಾ ನಿಯಂತ್ರಣ ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. ಕೆಲ ನಿಯಮಗಳನ್ನು ಅವ್ರು ವಿಡಿಯೋದಲ್ಲಿ ಹೇಳಿದ್ದಾರೆ. ಭಾರತೀಯರು ಇದೆಲ್ಲವನ್ನೂ ಪಾಲಿಸಿದ್ರೆ ಕೊರೊನಾ ವೈರಸ್ ನಿಂದ ಸುಲಭವಾಗಿ ಮುಕ್ತಿ ಪಡೆಯಬಹುದು ಎಂದು ಅವ್ರು ಹೇಳಿದ್ದಾರೆ.
ಈ ವೈರಸ್ ನಮ್ಮ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಗಂಟಲಿನಲ್ಲಿ ದಪ್ಪ ಲೋಳೆಯು ಉಂಟುಮಾಡುತ್ತದೆ. ಇದು ನಮಗೆ ಉಸಿರಾಟದ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಗಂಟಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿ ದಿನ ಗಾರ್ಗಲ್ ಮಾಡಬೇಕು. ಹಾಗೆ ಬಿಸಿಯಾದ ಆಹಾರ ಸೇವನೆ ಮಾಡಬೇಕು. ಬಿಸಿ ಟೀ, ಕಾಫಿ, ಸೂಪ್, ನೀರನ್ನು ಕುಡಿಯಬೇಕು.
ಮನೆಯಿಂದ ಹೊರಗೆ ಹೋಗಿ ಬಂದ ತಕ್ಷಣ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆ ಹಾಕಬೇಕು. ಸ್ನಾನ ಮಾಡಿ ಸ್ವಚ್ಛವಾಗಬೇಕು. ಆಗಾಗ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸೋಪ್ ನಲ್ಲಿ ಕೈ ತೊಳೆಯಬೇಕು. ವಿಟಮಿನ್ ಸಿ ಆಹಾರ ಸೇವನೆಯನ್ನು ಹೆಚ್ಚು ಮಾಡಬೇಕು. ಇಷ್ಟೇ ಅಲ್ಲ ಮನೆಯಿಂದ ಹೊರಹೋಗಿ ಬಂದ ತಕ್ಷಣ ಮನೆ ಬಾಗಿಲು, ಕಿಟಕಿಗಳನ್ನು ಸ್ಪರ್ಶಿಸಬಾರದು. ಬಾಗಿಲುಗಳನ್ನು ಸ್ಯಾನಿಟೈಜರ್ ನಿಂದ ಕ್ಲೀನ್ ಮಾಡಬೇಕು. ಪ್ರಾಣಿಗಳಿಂದ ಇದು ಹರಡುವುದಿಲ್ಲ. ಹಾಗಾಗಿ ಭಯಪಡುವ ಅಗತ್ಯವಿಲ್ಲ. ನಿಮ್ಮ ಪ್ರಾಣಿಗಳನ್ನು ನೀವು ನೋಡಿಕೊಳ್ಳಬಹುದು. ಬೇರೆ ಜ್ವರ, ಸಾಮಾನ್ಯ ನೆಗಡಿ ಇದ್ದರೂ ನೀವು ಔಷಧಿ, ಮಾತ್ರೆ ಸೇವಿಸಿ. ವೈದ್ಯರ ಭೇಟಿಯಾಗಿ. ಯಾಕೆಂದ್ರೆ ಉಳಿದ ರೋಗಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗೆ ತಣ್ಣನೆಯ ಆಹಾರವನ್ನು ನೀವೂ ಸೇವಿಸಬೇಡಿ. ಮಕ್ಕಳಿಗೂ ನೀಡಬೇಡಿ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
