Monday, March 27, 2023
Homeಪ್ರಮುಖ-ಸುದ್ದಿಕೊರೋನಾ ಕುರಿತು ಮಹಾರಾಷ್ಟ್ರದ ಜನತೆಗೆ ಗುಡ್ ನ್ಯೂಸ್

ಕೊರೋನಾ ಕುರಿತು ಮಹಾರಾಷ್ಟ್ರದ ಜನತೆಗೆ ಗುಡ್ ನ್ಯೂಸ್

- Advertisement -
- Advertisement -

ಪುಣೆ(ಮಹಾರಾಷ್ಟ್ರ): ಎರಡು ವಾರಗಳ ಹಿಂದೆ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದ ಮೊದಲೆರಡು ಕೊರೊನಾ ಸೋಂಕಿತರು ಗುಣಮುಖರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಬಾರಿ ಪರೀಕ್ಷೆ ನಡೆಸಿದಾಗಲೂ ಅವರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಪುಣೆ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮಂಗಳವಾರ ಆರು ಜನರಲ್ಲಿ ಕೊರೊನಾ ಪಾಸಿಟಿವ್​ ವರದಿ ಬಂದಿದ್ದು, ಸೋಂಕಿತರ ಸಂಖ್ಯೆ 107ಕ್ಕೆ ತಲುಪಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರು ನೂರರ ಗಡಿ ದಾಟಿದ್ದು, ಮೊದಲೆರಡು ಸೋಂಕಿತರು ಗುಣಮುಖರಾಗಿದ್ದಾರೆ. 2 ಬಾರಿ ಪರೀಕ್ಷೆಯಲ್ಲೂ ಸೋಂಕು ಕಾಣಿಸದ ಕಾರಣ ಅವರನ್ನು ಇಂದು ಡಿಸ್ಚಾರ್ಜ್​ ಮಾಡಲಾಗುತ್ತಿದೆ.

- Advertisement -
spot_img

Latest News

error: Content is protected !!