ಕೊರೊನಾ ವೈರಸ್ ಬಗ್ಗೆ ಆರೋಗ್ಯ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹಾಗೂ ವೈರಸ್ ಹರಡದಂತೆ ಇರಲು ನಾವು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು..ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ಆಹಾರವನ್ನು ಸೇವಿಸುವುದನ್ನು ಬಿಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಏನು ತಿನ್ನಬೇಕು/ಸೇವಿಸಬೇಕು
1) ಹೆಚ್ಚು ನೀರನ್ನು ಕುಡಿಯಿರಿ
2) ಗಂಟಲು ಒಣಗಲು ಬಿಡಬೇಡಿ
3) ಅಧಿಕ ಪೋಷಕಾಂಶವಿರುವ ಆಹಾರ ಸೇವಿಸಿ
4) ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ
5) ನುಗ್ಗೆಸೊಪ್ಪು, ಸೋರೆಕಾಯಿ., ಮೆಂತ್ಯ ಸೊಪ್ಪು ಸೇವಿಸಿ
6 ಸೋರೆಕಾಯಿ, ಬೂದು ಕುಂಬಳಕಾಯಿ, ಸೇರಿದಂತೆ ಹಸಿರು ತರಕಾರಿ ಸೇವಿಸಿ
7) ಆಹಾರದಲ್ಲಿ ಶುಂಠಿ, ಕಾಳು ಮೆಣಸನ್ನು ಕಡ್ಡಾಯವಾಗಿ ಬಳಸಿ
8) ಬಿಸಿ ಬಿಸಿಯಾದ ಆಹಾರ ಸೇವಿಸಿ
9) ಕಿತ್ತಳೆ, ಮೂಸಂಬಿ, ಪೇರಳೆ ಹಣ್ಣುಗಳನ್ನು ಸೇವಿಸಿ
10) ನೆಲ್ಲಿಕಾಯಿ, ಸಪೋಟ ಹಣ್ಣು ಸೇವಿಸುವುದು ಉತ್ತಮ
11) ಚಹಾ ಬದಲು ಶುಂಠಿ ಕಶಾಯ ಜೀರಿಗೆ ನೀರು ಸೇವಿಸಿ
ಏನು ಸೇವಿಸಬಾರದು
1) ತಂಪು ಪಾನೀಯ, ಐಸ್ ಕ್ರೀಂ ಬೇಡ’
2) ಹಸಿ ಮಾಂಸ ಸೇವಿಸುವುದು ಬಿಟ್ಟರೆ ಒಳ್ಳೆಯದು
3) ಬೇಯಿಸದೇ ಇರುವ ಆಹಾರ ಸೇವಿಸಬೇಡಿ
4) ತಣ್ಣಗಿರುವ ಆಹಾರ ಸೇವಿಸಬಾರದು
5) ಕಾಫಿ,ಟೀ ಸೇವಿಸದಿದ್ದರೆ ಒಳ್ಳೆಯದು
