- Advertisement -
- Advertisement -
ಉಜಿರೆ: ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿ ವಿಷಮವಾಗುತ್ತಿದ್ದು ಹೀಗಾಗಿ ಇದರ ವಿರುದ್ಧ ಹೋರಾಡಬೇಕಾದರೆ ಮುಂದಿನ ಮೂರು ವಾರಗಳ ಕಾಲ ದೇಶ ಲಾಕ್‌ಡೌನ್ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ತಕ್ಷಣವೇ ಉಜಿರೆ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕ ಮತ್ತು ಖ್ಯಾತ ವ್ಯಂಗ್ಯ ಕಲಾಕಾರ ಶೈಲೇಶ್ ಕುಮಾರ್ ಬಿಡಿಸಿರುವ ವ್ಯಂಗ್ಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
“ಒಗ್ಗಟ್ಟಾಗಿ, ನಾವು COVID-19 ವಿರುದ್ಧ ಹೋರಾಡುತ್ತೇವೆ ಮತ್ತು ಆರೋಗ್ಯವಂತ ಭಾರತಕ್ಕೆ ಜೊತೆಯಾಗುತ್ತೇವೆ” ಎನ್ನುವ ಕಲ್ಪನೆಯನ್ನು ಹೊಂದಿರುವ ಈ ಕಾರ್ಟೂನ್ ಎಲ್ಲರಿಗೂ ಇಷ್ಟವಾಗಿದ್ದು, ಅನೇಕ ಜನತೆ ಈ ಫೋಟೋವನ್ನು ತಮ್ಮ, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನ ಸ್ಟೇಟಸ್ ನಲ್ಲಿ ಹಾಕುತ್ತಿದ್ದಾರೆ
- Advertisement -
