Thursday, April 25, 2024
Homeಉದ್ಯಮಕೊರೋನಾ ಸಮಯದಲ್ಲಿ ತರಕಾರಿ, ದಿನಸಿ ಖರೀದಿ ಎಷ್ಟು ಸೇಫ್.?

ಕೊರೋನಾ ಸಮಯದಲ್ಲಿ ತರಕಾರಿ, ದಿನಸಿ ಖರೀದಿ ಎಷ್ಟು ಸೇಫ್.?

spot_img
- Advertisement -
- Advertisement -

ಕೊರೊನಾ ವೈರಸ್ ಮನುಷ್ಯನ ಸೀನು, ಕೆಮ್ಮು ಹಾಗೂ ಸ್ಪರ್ಶದಿಂದ ಆಗುತ್ತದೆ ಎಂಬುದು ಗೊತ್ತು. ಆದ್ರೆ ತರಕಾರಿ ಹಾಗೂ ದಿನಸಿಯಿಂದಲೂ ವೈರಸ್ ಹರಡುತ್ತಾ ಎಂಬುದರ ಬಗ್ಗೆ ಸಂಶೋಧನೆ ನಡೆದಿಲ್ಲ. ಬಹುತೇಕರು ಇಲ್ಲ ಎಂಬ ಉತ್ತರ ನೀಡಿದ್ದಾರೆ. ತರಕಾರಿ ಹಾಗೂ ದಿನಸಿ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೋದಲ್ಲಿ ಸೋಂಕು ಹರಡುವ ಅಪಾಯವಿದೆ. ಆದ್ರೆ ತರಕಾರಿ ಹಾಗೂ ದಿನಸಿಯಲ್ಲಿ ವೈರಸ್ ಇರುವುದಿಲ್ಲ ಎನ್ನಲಾಗಿದೆ.
ಒಂದು ವೇಳೆ ಸೋಂಕಿತ ವ್ಯಕ್ತಿ ತರಕಾರಿ, ದಿನಸಿ ಸ್ಪರ್ಶಿಸಿದ್ದು, ನೀವು ಅದನ್ನು ಸ್ಪರ್ಶಿಸಿದ್ರೆ ನಿಮಗೆ ಸೋಂಕು ತಗಲುತ್ತದೆ. ಇದೇ ಕಾರಣಕ್ಕೆ ಮಾರುಕಟ್ಟೆಗೆ ಹೋಗಿ ಬರುವವರೆಗೂ ಕೈಗಳಿಂದ ಮುಖ ಮುಟ್ಟಿಕೊಳ್ಳಬಾರದು. ಕೈಯನ್ನು ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳಬೇಕು.

ಅಡುಗೆ ಮಾಡುವಾಗ ಕೂಡ ಆಗಾಗ ಕೈ ತೊಳೆಯುತ್ತಿರಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಅಡುಗೆ ಮಾಡಬಾರದು. ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಮಾಂಸವನ್ನು ಹಸಿಯಾಗಿ ಸೇವಿಸಬಾರದು. ಹಾಗೆ ಅವಶ್ಯಕತೆಗಿಂತ ಹೆಚ್ಚು ದಿನಸಿಯನ್ನು ತಂದು ಹಾಳು ಮಾಡುವ ಬದಲು ಬೇಕಾದಷ್ಟನ್ನು ಮಾತ್ರ ತರಬೇಕು.

- Advertisement -
spot_img

Latest News

error: Content is protected !!