- Advertisement -
- Advertisement -
ಬೀದರ್ : ಜಿಲ್ಲೆಯಲ್ಲಿ ಕೊರೊನಾ ವೈರಸ್ ಶಂಕಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹದಿನೈದು ಜನ ಶಂಕಿತರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು, ಅದರಲ್ಲಿ ಹನ್ನೆರಡು ಜನ ಕೋವಿಡ್ 19 ಶಂಕಿತರ ವರದಿ ನೆಗೇಟಿವ್ ಬಂದಿದೆ. ಇನ್ನೂ ಮೂರು ಜನರ ವರದಿ ಬರಬೇಕಾಗಿದೆ.
ಬೀದರ್ ಜಿಲ್ಲೆಯಲ್ಲಿ ಒಟ್ಟು 554 ಜನರ ಮೇಲೆ ನಿಗಾ ಇಡಲಾಗಿದ್ದು, ಇದರಲ್ಲಿ 282 ಮಂದಿ ಈಗಾಗಲೇ ತಮ್ಮ 14 ದಿನಗಳ ಕ್ವಾರೆಂಟೈನ್ ಅವಧಿಯನ್ನು ಮುಗಿಸಿದ್ದಾರೆ.
ಒಟ್ಟಿನಲ್ಲಿ ಮಾರಕ ಕೊರೊನಾ ಸೋಂಕು ದಿನೇ ದಿನೇ ಆತಂಕ ಹೆಚ್ಚಿಸಿದ್ದು, ಜನತೆ ತಲ್ಲಣಗೊಂಡಿದ್ದಾರೆ. ಈ ನಡುವೆ, ಇಂದು ಒಂದೇ ದಿನ ರಾಜ್ಯದಲ್ಲಿ 10 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ51ಕ್ಕೆ ಏರಿಕೆಯಾಗಿದೆ.
- Advertisement -
